About this blog
ದೇವರ ದಾಸಿಮಯ್ಯನವರ ಬಗ್ಗೆ ತಿಳಿಯಲು ತುಂಬಾ ಇಷ್ಟ, ಆದರೆ ಎಲ್ಲೂ ಅವರ ಬಗ್ಗೆ ಹೆಚ್ಚು ವಿವರಗಳು ತಿಳಿದು ಬಂದಿಲ್ಲ. ಅವರು ವಚನಗಳನ್ನು ರಚಿಸಿರುವವರಲ್ಲಿ ಮೊದಲಿಗರಾದರೂ ಸಹ ಅವರ ವಚನಗಳು ಯಾರಿಗೂ ತಿಳಿದಿಲ್ಲ. ನಂತರ ಬಂದ ಎಲ್ಲಾ ಶರಣರೂ,ಸಾಧು ಸಂತರೂ ರಚಿಸಿದ ವಚನಗಳು ಬಳಕೆಗೆ ಮತ್ತು ಬೆಳಕಿಗೂ ಬ೦ದವು. ದಾಸಿಮಯ್ಯನವರ ಬಗ್ಗೆ ತಿಳಿಯಲು ಅಸಕ್ತಿ ಇರುವವರು ಈ ಬ್ಲಾಗ್ ಅನ್ನು ನೋಡಬಹುದು. ದೇವಲ ದಾಸಿಮಯ್ಯನವರ ಬಗ್ಗೆ ನನಗೆ ತಿಳಿದಿರುವ ಕೆಲವು ವಿವರಗಳನ್ನು ಮತ್ತು ಅವರು ರಚಿಸಿದ ಸುಂದರ ವಚನಗಳನ್ನು ಇಲ್ಲಿ ಬರೆದಿರುವೆ. ದಾಸಿಮಯ್ಯನವರು ದೇವರ ದಾಸಿಮಯ್ಯ/ದೇವಲ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಇವರಿಂದ ದೇವಾಂಗ ಎಂಬ ಜನಾಂಗವೂ ಸಮಾಜದಲ್ಲಿ ಬಂದಿತು. ಇವರು ಶಿವನೊಲುಮೆಯ ನಂತರ ಹಿಂಸೆಯನ್ನು ಬಿಟ್ಟು ಬಟ್ಟೆ ನೇಯುವ ಕಾಯಕದಲ್ಲಿ ತೊಡಗಿಕೊಂಡು, ದೇವರ ಸ್ಮರಣೆಯಲ್ಲಿ ತನ್ನ ಕೆಲಸ ಮಾಡುತ್ತಾ ಜೀವನವನ್ನು ಕಳೆದರು. ಅಹಿಂಸೆಯಲ್ಲಿ ಜೀವನ ಸಾಗಿಸುವ ನೀತಿಯನ್ನು ಜನರಿಗೆ ತಿಳಿಸುತ್ತಾ ಬಂದರು, ತಾನೂ ಸಹ ಅದೇ ಮಾರ್ಗದಲ್ಲಿ ನಡೆಯುತ್ತಿದ್ದರು. ಅನೇಕರಿಗೆ ಗುರುವಾದರು. ಸುಮಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ದೇವರ ಬಗ್ಗೆ ಸಾರಿದರು. ಅವರು ರಾಮನಾಥ ಎಂಬ ದೇವರಲ್ಲಿ ಅಪಾರವಾದ ಭಕ್ತಿಯನ್ನು ಇಟ್ಟು ಕೊಂಡಿದ್ದರು." ರಾಮನಾಥ" ಎನ್ನುವ ಹೆಸರಲ್ಲಿಯೇ ವಚನಗಳನ್ನು ರಚಿಸಿದರು.
0 comments:
Post a Comment